ಚಿತ್ರ: ಜೊತೆ ಜೊತೆಯಲಿ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ಹರಿಕೃಷ್ಣ
ಗಾಯನ: ರಾಜೇಶ್ ಕೃಷ್ನನ್ ಮತ್ತು ಶ್ರೇಯ ಘೋಶಾಲ್

ಓ ಗುಣವಂತ! 
ಓ ಗುಣವಂತ! ನೀನೆಂದು ನನಸ್ವಂತ |೨|
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಗು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ?
ಓ ಗುಣವಂತ! ನೀನೆಂದು ನನಸ್ವಂತ 
ನೀ ನನಗಂತ ಬರೆದಾಯ್ತು ಭಗವಂತ

ಗೊತ್ತೇನು?
ಓ ಓ..
ಕೇಳು 
ಏನು?
ನಾನು ಯಾರೊ.. ನೀನು ಯಾರೊ..
ಸೇರಿದ್ದು ಏಕೆ?
ಪ್ರೀತಿ ಮಾಡೋದಕ್ಕೆ
ಪ್ರೀತಿ ಮಾರೊ ದಾಸ ಯಾರೊ?
ಮಾರಿದ್ದು ಏಕೆ?
ಕೂಡಿ ಬಾಳೊದಕ್ಕೆ
ಈ ನಲಿವಿನಲೂ
ಆ ನೋವಿನಲೂ
ಏನಾದರುನೂ.. ಎಂತಾದರು
ಜೊತೆ ಜೊತೆಯಲೀ.. ನಿನ್ನ ಜೊತೆಯಲೀ.. ಜೊತೆಯಾಗುವೇ.. ಜೊತೆ ಬಾ ಅ ಅ ಅ!

ಓ ಗುಣವಂತ! ನೀನೆಂದು ನನಸ್ವಂತ 
ನೀ ನನಗಂತ ಬರೆದಾಯ್ತು ಭಗವಂತ

ಗುಟ್ಟೊಂದು
ಎನು?
ಕೇಳು
ಹೇಳು
ಭೂಮಿ ತೂಕ.. ಪ್ರೇಮ ಲೋಕ..
ಬಚ್ಚಿಡುವೆ ಎಲ್ಲಿ?
ಹೃದಯದಲ್ಲಿ ಕಣೋ
ಪ್ರೀತಿ ತೂಕ.. ಮಾಡಬೆಕಾ
ತಕ್ಕಡಿಯೆ ಎಲ್ಲಿ?
ಸಂಸಾರ ಕಣೆ
ಈ ಬದುಕಿನಲೀ
ದಿನ ನಗುವಿನಲೀ
ಹಿಂದಾದರೂನು
ಮುಂದಾದರು
ಜೊತೆ ಜೊತೆಯಲಿ.. ನಿನ್ನ ಜೊತೆಯಲಿ.. ಜೊತೆಯಾಗುವೆ.. ಜೊತೆ ಬಾ ಅ ಅ ಅ!

ಓ ಗುಣವಂತ! ನೀನೆಂದು ನನಸ್ವಂತ 
ನೀ ನನಗಂತ ಬರೆದಾಯ್ತು ಭಗವಂತ

ಉಸಿರು ಉಸಿರಾಣೆ ನಂಗು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ?

Category: ಕನ್ನಡ ಚಿತ್ರಸಾಹಿತ್ಯ
Category: ಜೊತೆ ಜೊತೆಯಲಿ ಚಿತ್ರ
Category: ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ